ಹಂಸಪಕ್ಷಿ

ಪುರಾಣಗಳಲ್ಲಿ ಹಂಸಪಕ್ಷಿಗೆ ವಿಶೇಷ ಸ್ಥಾನ. ಸರಸ್ವತಿಯ ವಾಹನವಾಗಿರುವ ಹಂಸ ವಿವೇಕದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಂಸಕ್ಷೀರ ನ್ಯಾಯ ಎಂಬುದು ಹಂಸಪಕ್ಷಿಗೆ ಸಲ್ಲುವ ವಿಶೇಷ ಮರ್ಯಾದೆ. ಬಟ್ಟಲೊಂದರಲ್ಲಿ ಹಾಲು ಹಾಗೂ ನೀರು ಬೆರೆಸಿಟ್ಟರೆ ರಾಜಹಂಸಗ

 · 1 min read

ಪುರಾಣಗಳಲ್ಲಿ ಹಂಸಪಕ್ಷಿಗೆ ವಿಶೇಷ ಸ್ಥಾನ. ಸರಸ್ವತಿಯ ವಾಹನವಾಗಿರುವ ಹಂಸ ವಿವೇಕದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಂಸಕ್ಷೀರ ನ್ಯಾಯ ಎಂಬುದು ಹಂಸಪಕ್ಷಿಗೆ ಸಲ್ಲುವ ವಿಶೇಷ ಮರ್ಯಾದೆ. ಬಟ್ಟಲೊಂದರಲ್ಲಿ ಹಾಲು ಹಾಗೂ ನೀರು ಬೆರೆಸಿಟ್ಟರೆ ರಾಜಹಂಸಗಳು ಹಾಲನ್ನು ಮಾತ್ರಾ ಹೀರಿ ನೀರನ್ನು ಹಾಗೆಯೇ ಬಿಡಲು ಸಮರ್ಥ ಎಂಬ ವ್ಯಾಖ್ಯೆ ಇದೆ. ಸತ್ವಗುಣಕ್ಕೆ ಬಿಳಿ ಮಣ್ಣದ ಹಂಸಗಳು ಉದಾಹರಣೆಯಾಗಿ ನಿಲ್ಲುತ್ತವೆ. ಇವೆಲ್ಲಾ ಪುರಾಣದಲ್ಲಿ ಬರುವ ಹಂಸಪಕ್ಷಿಯ ಕತೆಯಾದರೆ ಪ್ರಸ್ತುತ ನಮಗೆ ಕಾಣಸಿಗುದು ಹೆಬ್ಬಾತಿನ ಜಾತಿಗೆ ಸೇರಿದ ಹಂಸಗಳು. ಇವು ಕೂಡ ತುಂಬಾ ಸುಂದರ. ಹಂಸ ಧ್ವನಿ, ಹಂಸನಡಿಗೆ, ಎಂಬಂತಹ ಶಬ್ಧಗಳು ಅದರ ನಡಿಗೆ, ಅದರ ಒನಪು ಒಯ್ಯಾರ, ಅದರ ರಾಜ ಗಾಂಭೀರ್ಯದಿಂದ ಚಾಲ್ತಿಗೆ ಬಂದಿವೆ. ಪುಟ್ಟದೊಂದು ಕೆರೆ ಮನೆ ಪಕ್ಕದಲ್ಲಿದ್ದರೆ ಹಂಸಗಳನ್ನು ಸಾಕಬಹುದು.ಈ ಹಂಸಗಳು ಹಾಲು ನೀರನ್ನು ಬೇರೆ ಮಾಡಿ ಕುಡಿಯದಿದ್ದರೂ ಇವಕ್ಕೆ ನೀರಿನಲ್ಲಿ ಅಕ್ಕಿ ಅಥವಾ ಗೋದಿ ಹಾಕಿದರೆ ಪಕಪಕನೆ ತಿಂದು ಮುಗಿಸುತ್ತವೆ. ವರ್ಷಕ್ಕೊಮ್ಮೆ ಮೊಟ್ಟೆಯಿಡುವ ಇವು ಎಪ್ರಿಲ್ ಮೇ ತಿಂಗಳಿನಲ್ಲಿ ಮರಿಯನ್ನು ಹೊರತೆಗೆಯುತ್ತವೆ. ಆರರಿಂದ ೧೫ ಮೊಟ್ಟೆಯವರೆಗೂ ಒಂದು ಸಾರಿ ಇಡುವ ಹಂಸ ಮೊಟ್ಟೆಯಿಂದ ಮರಿ ಆಚೆ ಬಂದ ನಂತರ ಗಂಡು ಹೆಣ್ಣು ಹಂಸಗಳು ಒಟ್ಟಾಗಿ ಮರಿಗಳನ್ನು ರಕ್ಷಿಸುತ್ತವೆ. ಕುಟುಂಬ ಜೀವಿಯಾದ ಹಂಸಗಳು ೧ ಅಡಿ ಎತ್ತರ ಹಾಗೂ ೩ ಅಡಿ ಉದ್ದವಿದ್ದು ಸರಿ ಸುಮಾರು ೧೫ ಕೆಜಿ ತೂಗುತ್ತವೆ. ಬಾಲ್ಯದಲ್ಲಿ ಸಣ್ಣಪುಟ್ಟ ಹುಳುಗಳನ್ನು ತಿನ್ನುವ ಹಂಸ ತದನಂತರ ಕೆರೆಯಲ್ಲಿ ಸಿಗುವ ಗಿಡಗಳ ಬೇರನ್ನು ತಿಂದು ಬದುಕುತ್ತವೆ.ವಿಚಿತ್ರ ದನಿಯಲ್ಲಿ ಕೂಗುವ ಹಂಸ ವೃಥಾ ಕೆಣಕಿದರೆ ಮನುಷ್ಯರ ಮೇಲೆ ಧಾಳಿಯನ್ನೂ ಮಾಡಬಲ್ಲದು. ಗರಗಸದಂತಹ ಮೂತಿಯು ಇದಕ್ಕೆ ರಕ್ಷಿಸಿಕೊಳ್ಳಲು ತುಂಬಾ ಸಹಾಯಮಾಡುತ್ತದೆ. ನೆಲ ಮತ್ತು ಜಲದಲ್ಲಿ ಹಾಗೂ ಆಕಾಶದಲ್ಲಿ ಕೂಡ ಸ್ವಲ್ಪ ಮಟ್ಟಿಗೆ ಹಾರಬಲ್ಲ ಹಂಸ ಉಭಯಜೀವಿಯಲ್ಲ ತ್ರಿಭಯ ಜೀವಿ ಅಂತ ಹೊಸದಾಗಿ ಅನ್ನಬಹುದು. ಇವೆಲ್ಲಾ ಮಾಹಿತಿಯ ಜತೆಗೆ ಇಲ್ಲಿ ನಿಮಗೆ ಇನ್ನೊಂದು ಮಜ ಇದೆ. ಅಜ್ಜನಮನೆಗೆ ಬಂದಾಗ ನೀವು ಈ ಹಂಸಗಳನ್ನು ಖುದ್ದಾಗಿ ನೋಡಬಹುದು - ತ್ಯಾಂಕ್ಸ್ ಮೀಟ್ ಅಗೈನ್


No comments yet.

Add a comment
Ctrl+Enter to add comment